( update: nice appreciation received from sir Nagesh Hegde, check here )
2
ಹಲವು ಬಾರಿ ಅನಿಸಿದ್ದಿದೆ ಇರುವುದು ಎರಡೇ ಬಣ್ಣ ಕಪ್ಪು- ಬಿಳುಪು. ಬದುಕಿನಲ್ಲೂ ಅಷ್ಟೇ ಸುಖ- ದುಃಖ. ಮೊಗದಲ್ಲೂ ನಗು- ಅಳು. ಉಳಿದ ಬಣ್ಣ, ಭಾವಗಳೆಲ್ಲ ಕವಲುಗಳು.
ಮೊನ್ನೆ ಗೆಳತಿಯ ಹತ್ತಿರ ಹೇಳುತ್ತಿದ್ದೆ. ‘ಮುಂದಿನ ಜನ್ಮವೊಂದಿದ್ದರೆ ಹಕ್ಕಿಯಾಗಬೇಕು ಕಣೆ’ ಎಂದು. ಸರಹದ್ದಿನ ಜಂಜಾಟವಿಲ್ಲದ ನೀಲಿ ಬಾನು, ಬಿಳಿಯ ಮೋಡಗಳ ಜೊತೆ ಸರಸವಾಡುವ ಬಾನಾಡಿ. ಬಾಲ್ಯದಲ್ಲಿ ಅಜ್ಜಿಯ ಕಾಗಕ್ಕ ಗುಬ್ಬಕ್ಕನ ಕಥೆ ಕೇಳುತ್ತಿದ್ದಾಗ ಹಕ್ಕಿಗಳೆಂದರೆ ಸೋಜಿಗ, ‘ಒಂದು ಬಣ್ಣದ ಕನಸು’. ಅದರ ಗೂಡು ಮರಿಗಳು, ಹಾರಾಟ, ಚಿಲಿಪಿಲಿ ಎಲ್ಲದರ ಕಡೆಗೂ ಒಂದು ಬಗೆಯ ಕುತೂಹಲ. ಸಂಜೆ ಗದ್ದೆಯ ಬಯಲಲ್ಲಿ ಕೂತು ಗೂಡಿಗೆ ಮರಳುವ ಬೆಳ್ಳಕ್ಕಿಗಳ ಎಣಿಸುವಾಗ ಹಕ್ಕಿಯಾಗುವ ಕನಸಿನ ರೆಕ್ಕಿ ಬಿಚ್ಚಿ ಲೆಕ್ಕ ಮರೆತೇ ಹೋಗುತ್ತಿತ್ತಲ್ಲ. ಹೈಸ್ಕೂಲಿನ ದಿನಗಳಲ್ಲಿ ಆಗಸದಲ್ಲಿ ಶಬ್ದವಾದರೆ ಮನೆಯಂಗಳಕ್ಕೆ ನನ್ನನ್ನು ಎಳೆದು ತರುತ್ತಿದ್ದ ವಿಮಾನದ ಅನ್ವೇಷಣೆಗೆ ಪ್ರೇರಣೆ ಈ ಹಕ್ಕಿಗಳಲ್ಲದೇ ಇನ್ಯಾರು ? ಮೊನ್ನೆ ಮೊನ್ನೆ ಗೋಕರ್ಣದ ಕಡಲ ತಡಿಯಲ್ಲಿ ಪ್ಯಾರಾ ಗ್ಲೈಡಿಂಗ್ ಮಾಡುತ್ತಿದ್ದ ವಿದೇಶಿಗನನ್ನು ಹೀಯಾಳಿಸುವಂತೆ ಕಡಲ ನೀಲಿ ನೀರಿಗೆ ಪೈಪೋಟಿ ಕೊಡುತ್ತಿದ್ದ ಬಾನಿಗೆ ತಾಕುವಂತೆ ಹಾರಾಡುತ್ತಿದ್ದ ಗಿಡುಗವೊಂದನ್ನು ನೋಡಿ ನನಗೇ ಅರಿವಿಲ್ಲದಂತೆ ಚಪ್ಪಾಳೆ ತಟ್ಟಿದ್ದೆ .! ‘ಹಾರುವ ಕನಸುಗಳು’ ಈ ಹಕ್ಕಿಗಳು ಎಂದಿಗೂ ನನಗೆ ಸ್ವಾತಂತ್ರ್ಯದ ಸಂಕೇತ.
-ಸೌಮ್ಯ ಭಾಗ್ವತ್
ವೃತ್ತಿಯಲ್ಲಿ ಇಂಜಿನಿಯರ್ . ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಧೂಳಿನ ಕಣ ನಾನು. ನನಗೆ ನೆನಪಿರುವಂತೆ ಮೊದಲ ಬರಹ ಚುಟುಗಳ ರೂಪದ್ದು ಬರೆದದ್ದು ನನ್ನ ಹನ್ನೆರನೇ ವಯಸ್ಸಿನಲ್ಲಿ. ದಿನಕರ ದೇಸಾಯಿಯವರ ಚುಟುಕಗಳ ಪ್ರೇರಣೆಯಿಂದ.! ಅದಾದಮೇಲೆ ‘ಮಂಗಳನ ಅಂಗಳಕೆ’ ಎನ್ನುವ ತಲೆಬರಹದ ಅಡಿಯಲ್ಲಿ ಕವನವೆನ್ನಬಹುದಾದ ಕವನವನ್ನು ಒಂಭತ್ತನೇ ತರಗತಿಯಲ್ಲಿರುವಾಗ ಶಾಲೆಯ ಹಸ್ತ ಪತ್ರಿಕೆಗೆ ಬರೆದಿದ್ದೆ. ನಂತರ ನೋಟುಬುಕ್ಕಿನ ಹಿಂಬದಿಯ ಪೇಜಿನಲ್ಲಿ ಮನಸಿಗೆ ಬಂದಿದ್ದನ್ನು ಗೀಚುತ್ತಿದ್ದೆ. ಕಾಲೇಜಿನ ದಿನಗಳಲ್ಲಿ. ಕವನಗಳಿಂದ ಲೇಖನಗಳಿಗೆ ಭಡ್ತಿ ಹೊಂದಿತ್ತು ನನ್ನ ಮನಸು. ನಂತರ ಶುರುವಾದದ್ದು ಬ್ಲಾಗು. ಉದಯವಾಣಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿಗಳಲ್ಲಿ ಆಗಾಗ ಲೇಖನಗಳು ಪ್ರಕಟವಾಗುತ್ತಿರುತ್ತವೆ. ಛಾಯಾಚಿತ್ರಣ, ಚಿತ್ರಕಲೆ ಇತರ ಹವ್ಯಾಸಗಳು
“Mediation” is a photo-writing project where a black and white photo ( shot by me ) is used to express the feelings of the writer through words . These posts are written by different people. Two languages are used one is Kannada which is my mother tongue and the other is English. To know more about this project please check this link.
Dinesh Maneer
Photographer. Writer .Trekker.Traveler.Businessman based out of Karnataka, India
1 Comment
Comments are closed.
ನಮಸ್ಕಾರ ಕುಮಾರ ಹನುಮಂತಯ್ಯನವರೆ,
ಎಲ್ಲ ಹಕ್ಕಿಗಳ ಹಾರಾಟ ಆಹಾರಕ್ಕಾಗಿ ಜೊತೆಗೆ ಜೀವನ ನಿರ್ವಹಣೆಗಾಗಿ. ಆದರೆ ಮಾನವ ಎಲ್ಲ ಜೀವಿಗಳಲ್ಲೂ ತನ್ನ ಕನಸನ್ನು ಕಾಣುತ್ತಾನೆ. ತಾನೇ ಆದಾಗಿದ್ದರೆ ಎಂದು ಹಂಬಲಿಸುತ್ತಾನೆ. ಚಿತ್ರದಲ್ಲಿರುವುದು ಒಂದಿಷ್ಟು ಹಾರುತ್ತಿರುವ ಹಕ್ಕಿಗಳು ಜೊತೆಗೆ ರೆಕ್ಕೆಯಿದ್ದರೆ ಬಾನಿಗೆ ಹಾರೇ ಬಿಡುತ್ತೇನೆ ಎಂಬ ತುದಿತದಲ್ಲಿರುವ ಪೋರಿ. ಧನ್ಯವಾದಗಳು