೫೮ನೆ ಕನ್ನಡ ರಾಜ್ಯೋತ್ಸವವನ್ನು ಹೇಗಾದರೂ ಮಾಡಿ ಹೊಸ ರೀತಿಯಲ್ಲಿ ಆಚರಿಸಬೇಕೆಂದು ಅನ್ನಿಸುತ್ತಿತ್ತು . ಸಪ್ನಾ ಬುಕ್ಸ್ ಕಡೆಯಿಂದ ನಾಡು ಕಂಡ ೫೮ ಸಾಹಿತಿಗಳಿಗೆ   ಸನ್ಮಾನವಿರುವುದು ಗೊತ್ತಿತ್ತು .ಯಾಕೆ ಇವರನ್ನೆಲ್ಲ ನನ್ನ ಕ್ಯಾಮೆರಾ ದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡಬಾರದು ಎಂಬ ಯೋಚನೆ ಬಂದಿದ್ದೇ ತಕ್ಷಣ ನಿರ್ಧರಿಸಿಯೇ ಬಿಟ್ಟೆ .ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನ ಗೆಳೆಯ ಹಾಗು ಯುವಕವಿ ಬೇಲೂರು ರಘುನಂದನ್ ಅವರಿಗೂ ಸನ್ಮಾನವಿರುವುದು ಇನ್ನೂ ಒಂದು ಕಾರಣವಾಗಿತ್ತು . ಕೂಡಲೇ ಬೇಲೂರರಿಗು ತಿಳಿಸಿದೆ . ಅವರು ಸಾಧ್ಯವಾದಷ್ಟು ಸಾಹಿತಿಗಳಿಗೆ ನನ್ನ ಪರಿಚಯ ಮಾಡಿಕೊಡುತ್ತೇನೆ ಎಂದು ಭರವಸೆ ಕೊಟ್ಟರು.

ಇಂತಹ ಕಾರ್ಯಕ್ರಮಗಳಲ್ಲಿ ವ್ಯಕ್ತಿ ಚಿತ್ರಗಳನ್ನು ಮಾಡುವದು ಅಷ್ಟು ಸುಲಭವಲ್ಲ. ಸಿಗುವ ಸಮಯ ಕಡಿಮೆ ಮತ್ತು ಬೆಳಕು ಬಹಳ ಅನಿರೀಕ್ಷಿತವಾಗಿರುತ್ತದೆ . ಸರಿಯಾದ ಸಮಯ ನೋಡಿ , ಸರಿಯಾದ ಮುಖದ ಮುಖಭಾವನ್ನು ಗ್ರಹಿಸಿ ಚಿತ್ರಗಳನ್ನು ಮಾಡುವಾಗ ನನ್ನ ಗಮನ ಪೂರ್ತಿವಿಷಯದ ಕಡೆಗೆ ಹಾಕುವುದು ತುಂಬಾ ಅಗತ್ಯ . ಅಷ್ಟೇ ಅಲ್ಲದೇ ಗಣ್ಯವ್ಯಕ್ತಿಗಳಿಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸುತ್ತುವರೆದಿರುವರು , ಮಾತನಾಡಿಸುವವರು ಬಹಳ . ವ್ಯಕ್ತಿಯ ಹಿನ್ನೆಲೆಯನ್ನು ಗಮನಿಸುತ್ತ , ಮುಖದ ಮೇಲೆ ಬೀಳುತ್ತಿರುವ ಬೆಳಕನ್ನು ಗಮನಿಸುತ್ತ , ಅವರ ಮುಖಭಾವನ್ನು ಗಮನಿಸುತ್ತ ನನ್ನ ಕ್ಯಾಮೆರಾವನ್ನು ಸಿದ್ಧಗೊಳಿಸಿ ಕ್ಲಿಕ್ಕ್ಕಿಸುವಾಗ ಬೆವರೇ ಹರಿದುಬಿಡುತ್ತದೆ! ಇಂತಹ ಸಮಯಗಳಲ್ಲಿ ಗೆಳೆಯರೊಬ್ಬರು ಇದ್ದು ಮಾತನಾಡಿಸುತ್ತ ವಾತಾವರಣವನ್ನು ತಿಳಿಗೊಳಿಸಿದರೆ ನನಗೂ ಸಹಾಯ, ಚಿತ್ರೀಕರಿಸಲ್ಪಡುವ ವ್ಯಕ್ತಿಗಳಿಗೂ ಇರಿಸು ಮುರುಸು ತಪ್ಪುತ್ತದೆ.

ನವೆಂಬರ್ ೧ ರಂದು ಸರಿಯಾಗಿ ಬೆಳಿಗ್ಗೆ ಶಿಕ್ಷಕರ ಸದನದಲ್ಲಿ ೧೦ ಗಂಟೆಗೆ ಸೇರಿದಾಗ ಕನ್ನಡ ಶ್ರೀ ಪಂಚಮ ಹಳಿಬಂಡಿಯವರ ತಂಡದಿಂದ ಸುಶ್ರಾವ್ಯ ಕನ್ನಡ ಗೀತೆಗಳು ಹೊಮ್ಮುತ್ತಿರುವಾಗಲೇ ನನ್ನ ಕರ್ನಾಟಕ ರಾಜ್ಯೋತ್ಸವ ದಿನ ಸಾರ್ಥಕವೆನಿಸಿಬಿಟ್ಟಿತು. ಬೇಲೂರರು ಬಂದು ಸೇರಿಕೊಂಡು ” ದಿನೇಶ್, ಇವರೆಲ್ಲರ ಮುಂದೆ ನಾನು ತುಂಬಾ ಸಣ್ಣವ , ನನಗೆ ಇದೆಲ್ಲ ತುಂಬಾ ಮುಜುಗರ ” ಅಂದಾಗ ಅವರ ನಮ್ರತೆಯನ್ನು ತುಂಬಾ ಮೆಚ್ಚಿಕೊಂಡೆ. ಸನ್ಮಾನಿಸಲ್ಪಡುವ ಸಾಹಿತಿಗಳು ಒಬ್ಬೊಬ್ಬರಾಗಿ ಆಗಮಿಸುತ್ತ , ಅವರ ಜೊತೆ ಮಾತನಾಡುತ್ತ ಅಲ್ಲಿ ಇಲ್ಲಿ ಒಂದೆರಡು ಚಿತ್ರಗಳನ್ನು ಕದಿಯುತ್ತಾ ಇದ್ದೆ. ಕಾರ್ಯಕ್ರಮವಂತು ತುಂಬಾ ಚೆನ್ನಾಗಿ ಮೂಡಿಬಂತು. ಕರ್ನಾಟಕ ರಾಜ್ಯದ ಹೆಮ್ಮೆಯ ೫೮ ಸಾಹಿತಿಗಳನ್ನು ಒಂದೇ ಸಭೆಯಲ್ಲಿ ಸೇರಿಸುವುದು ಸಾಮಾನ್ಯದ ಕೆಲಸವಲ್ಲ . ಈ ಕೆಲಸ ಮಾಡಿದ ಸಪ್ನಾ ಬುಕ್ ಹೌಸ್ ನವರಿಗೆ ಬಹುದೊಡ್ಡ ಧನ್ಯವಾದಗಳು. ಒಟ್ಟಿನಲ್ಲಿ ಈ ದಿನ ರಾಜ್ಯೋತ್ಸವದ ದಿನದಂದೆ ಇಷ್ಟು ವಿಭಿನ್ನತೆಯ ಸಾಹಿತಿಗಳೆಲ್ಲ ಒಂದಾಗಿ ಸಭೆಯನ್ನು ಅಲಂಕರಿಸದ್ದನ್ನು ನೋಡುವ ಸದವಕಾಶ ಬಂದಿದ್ದು ನನ್ನ ಅವಿಸ್ಮರಣೀಯ ದಿನಗಳಲ್ಲೊಂದು. ಇದೆಲ್ಲಾಕ್ಕು ಮಿಗಿಲಾಗಿ ಈ ೫೮ ಸಾಹಿತಿಗಳಲ್ಲಿ ಹಲವಾರು ಶ್ರೇಷ್ಠರನ್ನು ಮಾತನಾಡಿಸುವ ಹಾಗು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಅವಕಾಶ ಬಂದಿದ್ದು ನನ್ನ ಭಾಗ್ಯ . ಒಂದು ಛಾಯಾಚಿತ್ರಗ್ರಾಹಕನಿಗೆ   ಇದಕ್ಕಿಂತ ಚೆನ್ನಾಗಿ ರಾಜ್ಯೋತ್ಸವ ಆಚರಿಸಲು ಸಾಧ್ಯವೇ ?

ಅಸಾಧ್ಯ ಅಂಬ ಅರಿವು ಇದ್ದರೂ ಬಂದ ಎಲ್ಲರ ಚಿತ್ರ ಹಿಡಿಯುವ ಆಶಯ ನನ್ನದಾಗಿತ್ತು. ಸಾಧ್ಯವಾದಷ್ಟು ಚಿತ್ರಗಳನ್ನು ಹಿಡಿದಿದ್ದೇನೆ , ಗಣ್ಯರ ವಿಭಿನ್ನ ಮುಖಭಾವ ತೋರಿಸುವ ಪ್ರಯತ್ನ ಮಾಡಿದ್ದೇನೆ , ನೋಡಿ, ಆನಂದಿಸಿ ಹಾಗು ಗೆಳೆಯರೊಡನೆ ಹಂಚಿಕೊಳ್ಳಿ .

quick head shots of senior Kannada writers made in a felicitation ceremony by Sapna books of Bengaluru on the Karnataka Rajyotsava day.

ಚನ್ನವೀರ ಕಣವಿ
ಡಾ ಚನ್ನವೀರ ಕಣವಿ Dr Chennaveera Kanavi
ಮಾಲತಿ ಪಟ್ಟಣಶೆಟ್ಟಿ
ಡಾ ಮಾಲತಿ ಪಟ್ಟಣಶೆಟ್ಟಿ  Dr Malathi Pattanashetty
ಕೆ.ಎಸ್.ನಿಸಾರ್ ಅಹಮದ್
ಡಾ ಕೆ.ಎಸ್.ನಿಸಾರ್ ಅಹಮದ್  Dr K S Nisar Ahammad
ಸಾ ಶಿ  ಮರುಳಯ್ಯ
ಡಾ ಸಾ ಶಿ ಮರುಳಯ್ಯ  Dr Sa Shi Marulayya
ಸಿದ್ದಲಿಂಗಯ್ಯ ಪಟ್ಟಣಶೆಟ್ಟಿ
ಡಾ ಸಿದ್ದಲಿಂಗಯ್ಯ ಪಟ್ಟಣಶೆಟ್ಟಿ Dr Siddalingayya Pattanashetty
ಕುಂ ವೀರಭದ್ರಪ್ಪ
ಡಾ ಕುಂ ವೀರಭದ್ರಪ್ಪ Dr Kum Vee
ಕಮಲಾ ಹಂಪನಾ
ಡಾ ಕಮಲಾ ಹಂಪನಾ Dr Kamala Hampana
ಪ್ರೊ.ಜಿ.ವೆಂಕಟಸುಬ್ಬಯ್ಯ
ಪ್ರೊ.ಜಿ.ವೆಂಕಟಸುಬ್ಬಯ್ಯ Prof . G Venkatasubbayya
ಡಾ. ಗಿರೆಡ್ಡಿ ಗೋವಿಂದರಾಜ
ಡಾ. ಗಿರೆಡ್ಡಿ ಗೋವಿಂದರಾಜ Dr Gireddi Govindaraj
ಎಚ್‌.ಎಸ್‌.ವೆಂಕಟೇಶ್‌
ಡಾ ಎಚ್‌.ಎಸ್‌.ವೆಂಕಟೇಶ್‌ಮೂರ್ತಿ Dr H S Venkateshmurthy

 

 ದೇ.ಜವರೆ ಗೌಡ
ಡಾ ದೇ.ಜವರೆ ಗೌಡ Dr Javaregowda

 

 

ಸಿ.ಪಿ. ಕೃಷ್ಣಕುಮಾರ್
ಡಾ ಸಿ.ಪಿ. ಕೃಷ್ಣಕುಮಾರ್ Dr C P Krishnakumar

 

 

ಆರ್. ತಾರಿಣಿ ಶುಭದಾಯಿನಿ
 ಶ್ರೀಮತಿ ಆರ್. ತಾರಿಣಿ ಶುಭದಾಯಿನಿ
ಬೇಲೂರು ರಘುನಂದನ್   ಅವರು ಡಾ.ಸಿದ್ದಲಿಂಗಯ್ಯ  ಜೊತೆ
ಬೇಲೂರು ರಘುನಂದನ್ ಅವರು ಡಾ.ಸಿದ್ದಲಿಂಗಯ್ಯ ಜೊತೆ  Shri Beluru Raghunandan with Dr Siddalingayya

Dinesh Maneer

Photographer. Writer .Trekker.Traveler.Businessman based out of Karnataka, India

All author posts

Privacy Preference Center